ಪ್ರಶ್ನೆಗಳು ಮತ್ತು ಉತ್ತರಗಳು

ಇದು Safari ಎಕ್ಸ್‌ಟೆನ್ಷನ್‌ ಆಗಿದೆ, ಇದು Safari ಯ ಒಳಗೆ ಮಾತ್ರ ಜಾಹೀರಾತುಗಳನ್ನು ಬ್ಲಾಕ್‌ ಮಾಡಬಹುದು, ಮತ್ತು ಬೇರೆಯ ಬ್ರೌಸರ್‌ಗಳು, ಆ್ಯಪ್‌ಗಳು ಅಥವಾ ಗೇಮ್‌ಗಳ ಒಳಗೆ ಅಲ್ಲ. ಸಾಧ್ಯವಾದಾಗ ವೆಬ್ ಆವೃತ್ತಿಯನ್ನು ಬಳಸಿ (ಉದಾ. Safari ಯಲ್ಲಿ youtube.com ಅನ್ನು ತೆರೆಯಿರಿ).

ನವೀಕರಿಸಿದ ನಂತರ Safari ಕೆಲವೊಮ್ಮೆ ಫಿಲ್ಟರ್‌ಗಳನ್ನು ಮರುಲೋಡ್ ಮಾಡುವುದಿಲ್ಲ. ಸೆಟ್ಟಿಂಗ್‌ಗಳಲ್ಲಿ ಆ್ಯಪ್‌ನ ಎಕ್ಸ್‌ಟೆನ್ಷನ್‌ಗಳನ್ನು ಇನ್ನೂ ಸಕ್ರಿಯಗೊಳಿಸಲಾಗಿದೆಯೇ ಎಂದು ಪರಿಶೀಲಿಸಿ, ಮತ್ತು ನಂತರ Safari ಅನ್ನು ಬಲವಂತವಾಗಿ ಪುನಃ ಪ್ರಾರಂಭಿಸಿ (ನಿರ್ಗಮಿಸಿ ಮತ್ತು ಪುನಃ ತೆರೆಯಿರಿ).

ಇಲ್ಲ. ಆ್ಯಪ್‌ Apple ನ ಅಧಿಕೃತ ಕಂಟೆಂಟ್ ಬ್ಲಾಕಿಂಗ್ API ಅನ್ನು ಬಳಸುತ್ತದೆ - ಇದು ನಿಮ್ಮ ಬ್ರೌಸಿಂಗ್ ಡೇಟಾಗೆ ಯಾವುದೇ ಪ್ರವೇಶವನ್ನು ಹೊಂದದೆ Safari ಗೆ ಬ್ಲಾಕ್‌ ಮಾಡುವ ನಿಯಮಗಳ ಪಟ್ಟಿಯನ್ನು ಒದಗಿಸುತ್ತದೆ.

Apple ಒಂದು ಎಕ್ಸ್‌ಟೆನ್ಷನ್‌ ಅನ್ನು 50,000 ಬ್ಲಾಕ್‌ ಮಾಡುವ ನಿಯಮಗಳಿಗೆ ಮಿತಿಗೊಳಿಸುತ್ತದೆ - ದುರದೃಷ್ಟವಶಾತ್ ಆಧುನಿಕ ಆಡ್‌ಬ್ಲಾಕರ್‌ಗೆ ಇದು ಸಾಕಾಗುವುದಿಲ್ಲ. ಅವುಗಳನ್ನು 6 ಎಕ್ಸ್‌ಟೆನ್ಷನ್‌ಗಳಾಗಿ ವಿಭಜಿಸುವುದರಿಂದ Safari ಗೆ 300,000 ನಿಯಮಗಳನ್ನು ಪೂರೈಸಲು ಆ್ಯಪ್‌ ಅನುಮತಿಸುತ್ತದೆ.

ಬ್ಲಾಕ್‌ ಮಾಡುವುದನ್ನು ತಾತ್ಕಾಲಿಕವಾಗಿ ವಿರಾಮಗೊಳಿಸಲು, iOS/iPadOS ನಲ್ಲಿ ವಿಳಾಸ ಕ್ಷೇತ್ರದ ಎಡಭಾಗದಲ್ಲಿರುವ 'aA' ಬಟನ್ ಮೇಲೆ ಟ್ಯಾಪ್ ಮಾಡಿ ಮತ್ತು 'ಕಂಟೆಂಟ್ ಬ್ಲಾಕರ್‌ಗಳನ್ನು ಆಫ್ ಮಾಡಿ' ಆರಿಸಿ.
ಅದೇ ಮೆನುವಿನಲ್ಲಿ, ಬ್ಲಾಕ್‌ ಮಾಡುವುದನ್ನು ಶಾಶ್ವತವಾಗಿ ನಿಷ್ಕ್ರಿಯಗೊಳಿಸಲು, ನೀವು 'ವೆಬ್‌ಸೈಟ್ ಸೆಟ್ಟಿಂಗ್‌ಗಳು' ಆಯ್ಕೆ ಮಾಡಬಹುದು ಮತ್ತು ''ಕಂಟೆಂಟ್ ಬ್ಲಾಕರ್‌ಗಳನ್ನು ಬಳಸಿ' ಅನ್ನು ನಿಷ್ಕ್ರಿಯಗೊಳಿಸಬಹುದು.

ಬ್ಲಾಕ್‌ ಮಾಡುವುದನ್ನು ತಾತ್ಕಾಲಿಕವಾಗಿ ವಿರಾಮಗೊಳಿಸಲು, macOS ನಲ್ಲಿ ವಿಳಾಸ ಕ್ಷೇತ್ರದ ಬಲಭಾಗದಲ್ಲಿರುವ ರಿಫ್ರೆಶ್ ಬಟನ್ ಮೇಲೆ ಬಲ ಕ್ಲಿಕ್ ಮಾಡಿ ಮತ್ತು 'ಕಂಟೆಂಟ್ ಬ್ಲಾಕರ್‌ಗಳನ್ನು ಆಫ್ ಮಾಡಿ' ಆರಿಸಿ. ಬ್ಲಾಕ್‌ ಮಾಡುವುದನ್ನು ಶಾಶ್ವತವಾಗಿ ನಿಷ್ಕ್ರಿಯಗೊಳಿಸಲು, ವಿಳಾಸ ಕ್ಷೇತ್ರದ ಮೇಲೆ ಬಲ ಕ್ಲಿಕ್ ಮಾಡಿ ಮತ್ತು 'ವೆಬ್‌ಸೈಟ್ ಸೆಟ್ಟಿಂಗ್‌ಗಳು' ಆರಿಸಿ ಮತ್ತು ''ಕಂಟೆಂಟ್ ಬ್ಲಾಕರ್‌ಗಳನ್ನು ಸಕ್ರಿಯಗೊಳಿಸಿ' ಅನ್ನು ನಿಷ್ಕ್ರಿಯಗೊಳಿಸಿ.

iOS/iPadOS:
ವಿಳಾಸ ಕ್ಷೇತ್ರದ ಎಡಭಾಗದಲ್ಲಿರುವ 'aA' ಬಟನ್ ಅನ್ನು ತಟ್ಟಿ. 'ವೆಬ್‌ಸೈಟ್ ಸೆಟ್ಟಿಂಗ್‌ಗಳು' ಆಯ್ಕೆಮಾಡಿ ಮತ್ತು ' ಕಂಟೆಂಟ್ ಬ್ಲಾಕರ್‌ಗಳನ್ನು ಬಳಸಿ' ಅನ್ನು ಆಫ್ ಮಾಡಿ.
ಪಟ್ಟಿಯನ್ನು ವೀಕ್ಷಿಸಲು ಮತ್ತು ನಿರ್ವಹಿಸಲು, ಸೆಟ್ಟಿಂಗ್‌ಗಳು > Safari > ಕಂಟೆಂಟ್ ಬ್ಲಾಕರ್‌ಗಳಿಗೆ ಹೋಗಿ.

macOS:
ವಿಳಾಸ ಕ್ಷೇತ್ರದ ಮೇಲೆ ಬಲ ಕ್ಲಿಕ್ ಮಾಡಿ, 'ವೆಬ್‌ಸೈಟ್ ಸೆಟ್ಟಿಂಗ್‌ಗಳು' ಆಯ್ಕೆಮಾಡಿ ಮತ್ತು 'ಕಂಟೆಂಟ್‌ ಬ್ಲಾಕರ್‌ಗಳನ್ನು ಸಕ್ರಿಯಗೊಳಿಸಿ' ಅನ್ನು ಗುರುತಿಸಿರುವುದನ್ನು ತೆಗೆದುಹಾಕಿ.
ಪಟ್ಟಿಯನ್ನು ವೀಕ್ಷಿಸಲು ಮತ್ತು ನಿರ್ವಹಿಸಲು, Safari > ಆದ್ಯತೆಗಳು > ವೆಬ್‌ಸೈಟ್‌ಗಳು > ಕಂಟೆಂಟ್ ಬ್ಲಾಕರ್‌ಗಳಿಗೆ ಹೋಗಿ.

1. ಆಡ್‌ಬ್ಲಾಕ್ ಪ್ರೋ ಅನ್ನು ಸೆಟ್ಟಿಂಗ್‌ಗಳು > Safari > ಕಂಟೆಂಟ್ ಬ್ಲಾಕರ್‌ಗಳು (iOS) ಅಥವಾ Safari ಪ್ರಾಶಸ್ತ್ಯಗಳು > ಎಕ್ಸ್‌ಟೆನ್ಷನ್‌ಗಳು (macOS) ನಲ್ಲಿ ಸಕ್ರಿಯಗೊಳಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

2. ಆಡ್‌ಬ್ಲಾಕ್ ಪ್ರೋ ಅನ್ನು ಪ್ರಾರಂಭಿಸಿ ಮತ್ತು ಮೊದಲ ಟ್ಯಾಬ್‌ನಲ್ಲಿ ಶಿಫಾರಸು ಮಾಡಲಾದ ಆಯ್ಕೆಗಳನ್ನು ಸಕ್ರಿಯಗೊಳಿಸಿ.

3. ನಿಮ್ಮ ಶ್ವೇತಪಟ್ಟಿಯನ್ನು ಪರಿಶೀಲಿಸಿ ಮತ್ತು ಬ್ಲಾಕ್‌ ಮಾಡದ ವೆಬ್‌ಸೈಟ್‌ಗೆ ನಮೂದು ಇಲ್ಲವೇ ಎಂಬುದನ್ನು ನೋಡಿ.

ಅದು ಉಪಯೋಗವಾಗದಿದ್ದರೆ, ನಿಮ್ಮ ಸಾಧನವನ್ನು ಪುನಃ ಪ್ರಾರಂಭಿಸಿ ಮತ್ತು ಮೇಲಿನ ಹಂತಗಳನ್ನು ಪುನರಾವರ್ತಿಸಿ. ಹಲವು ವೆಬ್‌ಸೈಟ್‌ಗಳನ್ನು ಪ್ರಯತ್ನಿಸಿ, ಕೇವಲ ಒಂದು ಪುಟವಲ್ಲ. ನೀವು ಇನ್ನೂ ಸಹ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ದಯವಿಟ್ಟು ನಮಗೆ ತಿಳಿಸಿ.

ಸಿಂಕ್ ಆ್ಯಪ್‌ ಆವೃತ್ತಿ ಕೇವಲ 6.5 ಅಥವಾ ನಂತರದ ಮತ್ತು iOS 13 ಅಥವಾ ನಂತರದ ಮತ್ತು macOS Catalina (10.15) ಅಥವಾ ನಂತರದ ಆವೃತ್ತಿಗಳಲ್ಲಿ ಮಾತ್ರ ಬೆಂಬಲಿತವಾಗಿದೆ. ಸಿಂಕ್ ಪ್ರಾಪಗೇಟ್‌ ಆಗಲು ಸಾಮಾನ್ಯವಾಗಿ ಒಂದು ನಿಮಿಷ ತೆಗೆದುಕೊಳ್ಳಬಹುದು. ಸಿಂಕ್ ಕೆಲಸ ಮಾಡದೆ ಸಿಲುಕಿಕೊಂಡಿದ್ದರೆ, ಕೆಲವೊಮ್ಮೆ ಆ್ಯಪ್‌ ಅನ್ನು ಪುನಃ ಪ್ರಾರಂಭಿಸುವುದರಿಂದ ಅದನ್ನು ಸರಿಪಡಿಸಬಹುದು.

ಪ್ರತಿಯೊಂದು ವೆಬ್‌ಸೈಟ್‌ಗೆ ಸೆಟ್ಟಿಂಗ್‌ಗಳನ್ನು ಸುಲಭವಾಗಿ ಹೊಂದಿಸಲು, ನೀವು ಆ್ಯಪ್‌ನ ಕ್ರಿಯೆಯ ಬಟನ್ ಅನ್ನು Safari ಗೆ ಸೇರಿಸಬಹುದು. iOS/iPadOS ನಲ್ಲಿ Safari ನಲ್ಲಿನ ಶೇರ್‌ ಬಟನ್ ಮೇಲೆ ಟ್ಯಾಪ್ ಮಾಡಿ, ಸಂಪೂರ್ಣವಾಗಿ ಕೆಳಗೆ ಸ್ಕ್ರಾಲ್ ಮಾಡಿ, 'ಆಕ್ಷನ್‌ಗಳನ್ನು ಎಡಿಟ್‌ ಮಾಡಿ...' ಮೇಲೆ ಟ್ಯಾಪ್ ಮಾಡಿ ಮತ್ತು ಪಟ್ಟಿಗೆ ಆಡ್‌ಬ್ಲಾಕ್‌ ಪ್ರೋ ವನ್ನು ಸೇರಿಸಿ.

ವೆಬ್‌ಸೈಟ್‌ಗಳನ್ನು ಸಂವಾದಾತ್ಮಕವಾಗಿಸಲು, JavaScript ಒಂದು ವಿಶೇಷವಾದ ಭಾಷೆಯಾಗಿದೆ. ಆದರೆ ಕೆಲವೊಮ್ಮೆ ಜಾಹೀರಾತುಗಳನ್ನು ಸೇರಿಸಲು ಅಥವಾ ನಿಮ್ಮನ್ನು ಆನ್‌ಲೈನ್‌ನಲ್ಲಿ ಟ್ರ್ಯಾಕ್ ಮಾಡಲು ಇದನ್ನು ಬಳಸಬಹುದು. ಅದನ್ನು ಆಫ್ ಮಾಡುವುದರಿಂದ ಅದು ಬಹತೇಕವಾಗಿ ನಿಲ್ಲುತ್ತದೆ, ಆದರೆ ಇದು ವೆಬ್‌ಸೈಟ್ ಕಾರ್ಯವನ್ನೂ ಸಹ ಸ್ಥಗಿತಗೊಳಿಸಬಹುದು.

Top